ಚಿಕ್ಕಮಗಳೂರಿನಲ್ಲಿ ಒಂದೇ ದಿನ ಕೊರೋನಾದ ದ್ವಿಶತಕದ ದಾಖಲೆಯಾಗಿದೆ. ದೇಶಾದ್ಯಂತ ಏಕಾಏಕಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು ಎಲ್ಲೆಡೆ ಜನರು ಭಯಭೀತರಾಗಿದ್ದಾರೆ. ಬೆಡ್ ಹಾಗೂ ಆಕ್ಸಿಜನ್ ಕೊರತೆ ಎಲ್ಲೆಡೆ ತಲೆದೋರಿದೆ. ಈ ನಡುವೆ ಇಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ದಾಖಲೆಯ ಕೊರೋನಾ ಕೇಸ್ ಪತ್ತೆಯಾಗಿದ್ದು ಎಲ್ಲರ ನಿದ್ದೆ ಕೆಡಿಸುವಂತೆ ಮಾಡಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಒಟ್ಟು 229ಕೇಸ್ ಗಳು ಪತ್ತೆಯಾಗಿದ್ದು, ಒಂದು ಸಾವು ಸಂಭವಿಸಿದೆ.
ತಾಲ್ಲೂಕುವಾರು ನೋಡಿದಾಗ
- ಚಿಕ್ಕಮಗಳೂರು 81
- ಶೃಂಗೇರಿ 14
- ಮೂಡಿಗೆರೆ 38
- ಕೊಪ್ಪ 17
- ಎನ್ ಆರ್ ಪುರ 7
- ತರೀಕೆರೆ 31
- ಕಡೂರು 41
ಹೀಗೆ ಒಟ್ಟು 229 ಪ್ರಕರಣಗಳು ದಾಖಲಾಗಿವೆ. ಸಧ್ಯಕ್ಕೆ ಜಿಲ್ಲೆಯಲ್ಲಿ ಬೆಡ್ ಹಾಗೂ ಆಕ್ಸಿಜನ್ ಕೊರತೆ ಇರುವುದಿಲ್ಲ. ಸಾರ್ವಜನಿಕರು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ.
ಭಯ ಬೇಡ ಎಚ್ಚರಿಕೆ ಇರಲಿ.



2 Comments
🙏🙏
ReplyDelete😔😔😔
ReplyDelete