ಎನ್ ಆರ್ ಪುರ: ಹಿಂದೂ ದೇವಸ್ಥಾನಗಳನ್ನು ತೆರುವುಗೊಳಿಸುವುದರಲ್ಲಿ ಕರ್ನಾಟಕ ತೋರಿಸುತ್ತಿರುವ ನಿರ್ಲಕ್ಷ್ಯ ಹಾಗೂ ಹೋಬಳಿಮಟ್ಟದ ಆಟೋ ಪರ್ಮಿಟ್ ಗೆ ನೀಡಿರುವ ಆದೇಶವನ್ನು ಪುನರ್ ಪರಿಶೀಲನೆ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಯುವಜನತಾದಳದವರು ಮನವಿಯನ್ನು ಮಾಡಿದ್ದಾರೆ.

ದಿನಾಂಕ 20-4-2021 ರಂದು ನಡೆದ ಪ್ರಾದೇಶಿಕ ಸಾರಿಗೆ ಸಭೆಯಲ್ಲಿ ಜಿಲ್ಲೆಯ ಯಾವ ಆಟೋ ಚಾಲಕರ ಸಂಘದ ಪ್ರತಿನಿಧಿಗಳಿಗೂ ಮಾಹಿತಿಯನ್ನು ನೀಡದೆ ಅವರೇ ನಿರ್ಧಾರವನ್ನು ಕೈಗೊಂಡು ಆಟೋ ಚಾಲಕರ ಜೀವನದ ಮೇಲೆ ಮರಣ ಶಾಸನವನ್ನು ಬರೆದಿದ್ದಾರೆ.

ಜಿಲ್ಲೆಯ ಹಲವೆಡೆ ಹಳ್ಳಿಗಳಲ್ಲಿ ಕಿರಿದಾದ ರಸ್ತೆಗಳಿರುವುದರಿಂದ ಆಟೋಗಳಲ್ಲಿ ಪ್ರಯಾಣ ನಡೆಸುವ ಜನರನ್ನು ಕೂರಿಸಿಕೊಂಡು ಪ್ರಯಾಣ ನಡೆಸುವುದು ಅತ್ಯಂತ ಕಷ್ಟಕರವಾಗಿದೆ, ಆದ್ದರಿಂದ ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ಹಿಂದೆ ಇದ್ದಂತಹ ರಹದಾರಿಯನ್ನು ಮುಂದುವರೆಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಮನವಿಯನ್ನು ಮಾಡಿದ್ದಾರೆ.