ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಬಿಜೆಪಿ ಸರ್ಕಾರ ಮಂಡಿಸಲು ಮುಂದಾಗಿರುವ  ಮತಾಂತರ ನಿಷೇಧ ಕಾಯ್ದೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆ ಚಿಕ್ಕಮಗಳೂರಿನಲ್ಲಿ ಶಾಸಕ ಸಿಟಿ ರವಿ ವಿರೋಧ ಪಕ್ಷಗಳ ಮೇಲೆ ಹರಿಹಾಯ್ದಿದ್ದಾರೆ.

ಹಿಂದೂ ಧರ್ಮವನ್ನು ಬಿಟ್ಟು ಮುಸ್ಲಿಂ ಧರ್ಮಕ್ಕೆ ಮತಾಂತರವಾದರೆ ಅಂಬೇಡ್ಕರ್ ಹಾಗೂ ಬುದ್ಧರಿಗೆ ಜಾಗವಿಲ್ಲ, ಗಾಂಧೀಜಿಯ ಹಿಂದುತ್ವ ನಮ್ಮದು ಎಂದು ಬೊಗಳೆ ಬಿಡುವ ಕಾಂಗ್ರೆಸ್ ನಾಯಕರು ಮೊದಲು ಯೋಚನೆ ಮಾಡಬೇಕು ಗಾಂಧೀಜಿ ಮತಾಂತರವನ್ನು ದೇಶಾಂತರ ಎಂದು ಪ್ರತಿಪಾದಿಸಿದ್ದರು ಎನ್ನುವುದನ್ನು. 

ಇತಿಹಾಸವನ್ನು ತಿರುಚುವ ಕೆಲಸ ಮಾಡದೆ ತಿಳಿದುಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್ಸಿಗರು ಮಾಡಬೇಕು, ಕಾಂಗ್ರೆಸ್ ಪಕ್ಷಕ್ಕೆ ಸಮಾಜದ ಹಿತ ಹಾಗೂ ರಾಷ್ಟ್ರದ ಕುರಿತಾದ ಕಿಂಚಿತ್ತೂ ಗೌರವ ಇಲ್ಲದ ಕಾರಣ ಜನರ ಜೀವನಕ್ಕೆ ಸೂಕ್ತವಿರುವ ಕಾಯ್ದೆಗಳನ್ನು ವಿರೋಧಿಸುತ್ತಾರೆ ಎಂದರು.

ಯಾರದೇ ಒತ್ತಡ ಅಥವಾ ಭಯವಿಲ್ಲದೆ ಮತಾಂತರ ಆಗುವವರಿಗೆ ಈ ಕಾಯ್ದೆಯಿಂದ ಯಾವುದೇ ತೊಂದರೆಗಳು ಇಲ್ಲ, ಆದರೆ ಯಾರು ಆಮಿಷಗಳಿಗೆ ಒಳಗಾಗಿ ಮತಾಂತರ ಆಗುತ್ತಾರೋ ಅವರು ಈ ಕಾಯ್ದೆಯನ್ನು ವಿರೋಧ ಮಾಡುತ್ತಾರೆ ಎಂದುರು. ವೋಟಿಗಾಗಿ ಮತಾಂತರವನ್ನು ಕಾಂಗ್ರೆಸ್ಸಿಗರು ಬಳಸಿಕೊಳ್ಳದೆ ಜನರ ಒಳಿತಿಗಾಗಿ ಕೆಲಸ ಮಾಡುವುದನ್ನು ಕಾಂಗ್ರೆಸ್ ಪಕ್ಷದವರು ಕಲಿಯಬೇಕೆಂದರು.

ತನು ಕೊಟ್ಟಿಗೆಹಾರ, ವರದಿಗಾರರು.