ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಶಿವಾಜಿ ಜಯಂತಿ ಅಂಗವಾಗಿ ಚಿಕ್ಕಮಗಳೂರಿನಲ್ಲಿ ಇಂದು ಶಿವಾಜಿ ಜಯಂತಿ ಕಾರ್ಯಕ್ರಮದ ಆಚರಣೆ ನಡೆಯಿತು.

ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಒಗ್ಗೂಡಿ ಶಿವಾಜಿ ಜಯಂತಿ ಕಾರ್ಯಕ್ರಮವನ್ನು ಆಚರಣೆ ಮಾಡಿದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ವಿಶ್ವ ಹಿಂದೂ ಪರಿಷತ್ ನ ಜಿಲ್ಲಾಧ್ಯಕ್ಷರಾದ ಶ್ರೀಕಾಂತ ಪೈ ನೆರವೇರಿಸಿದರು.

ಇದನ್ನು ಓದಿ : ಇಲಾಖೆಯ ಅಭಿಪ್ರಾಯ ಪಡೆಯದೇ ಹಕ್ಕುಪತ್ರ ವಿತರಣೆ ಹಿನ್ನೆಲೆ ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಇ ಸ್ವತ್ತು ಮಾಡದಂತೆ ಅರಣ್ಯ ಇಲಾಖೆಯಿಂದ ಪತ್ರ.

ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಬಜರಂಗದಳದ ಜಿಲ್ಲಾ ಸಹಕಾರ್ಯದರ್ಶಿ ರಂಗನಾಥ್ ಛತ್ರಪತಿ ಶಿವಾಜಿ ಮಹಾರಾಜ್ ರ ಚರಿತ್ರೆಯನ್ನು ನೆರೆದವರಿಗೆ ತಿಳಿಸಿದರು. ಶಿವಾಜಿ ಮಹಾರಾಜರ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹಿಂದೂ ಸಮಾಜದ ಒಳಿತಿಗಾಗಿ ಶ್ರಮಿಸೋಣ ಎಂದು ನೆರೆದವರಲ್ಲಿ ತಿಳಿಸಿದರು.

ಕಾರ್ಯಕ್ರಮದ ಕುರಿತಾಗಿ ದಿಕ್ಸೂಚಿ ಭಾಷಣವನ್ನು ಸುಮಂತ್ ನೆಮ್ಮಾರ್ ಮಾಡಿದರು. ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಸವಿಸ್ತಾರವಾಗಿ ಮಾತನಾಡಿದ ಅವರು ಶಿವಾಜಿ ಮಹಾರಾಜರ ರೀತಿ ಪರಾಕ್ರಮವನ್ನು ಹಿಂದೂ ಸಮಾಜದ ತರುಣರು ಬೆಳೆಸಿಕೊಳ್ಳಬೇಕು ಆ ಮೂಲಕ ಸಮಾಜದ ರಕ್ಷಣೆಗೆ ಮುಂದಾಗಬೇಕು ಎಂದರು, ಹಾಗೂ ದೇಶದಲ್ಲಿ ಆಗುತ್ತಿರುವ ಅನಾಹುತಗಳನ್ನು ಎಚ್ಚರಿಸಿ ಈ ಎಲ್ಲಾ ಅನಾಹುತಗಳನ್ನು ಎದುರಿಸಲು ಬಜರಂಗದಳ ಸಿದ್ಧವಿದೆ ಹೆಣ್ಣುಮಕ್ಕಳ ಗೌರವದ ಸಂಕೇತವಾದ ಸಿಂಧೂರ ಇದರ ತಂಟೆಗೆ ಬಂದರೆ ಅಂದು ಛತ್ರಪತಿ ಶಿವಾಜಿ ಮಹಾರಾಜ್ ಹೇಗೆ ಗೋ ಹಂತಕನ ಕೈ ಕತ್ತರಿಸಿದರು ಅದೇ ರೀತಿ ಸಿಂಧೂರದ ತಂಟೆಗೆ ಬಂದವರ ಶಿರಚ್ಛೇದನವಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದರು.

ಈ ಕಾರ್ಯಕ್ರಮದಲ್ಲಿ ಶ್ರೀಕಾಂತ ಪೈ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷರು,ರಂಗನಾಥ್ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ,ಅಮಿತ್ ಗೌಡ ಬಜರಂಗದಳ ಜಿಲ್ಲಾ ಸಹ ಸಂಯೋಜಕ, ಶ್ಯಾಮ್ ಗೌಡ ನಗರ ಸಂಯೋಜಕ ಬಜರಂಗದಳ ಚಿಕ್ಕಮಗಳೂರು, ಗುರು ಬಜರಂಗದಳ ಜಿಲ್ಲಾ ವಿದ್ಯಾರ್ಥಿ ಪ್ರಮುಖ್, ಕೃಷ್ಣ ಟಿ ಗೌಡ ಬಜರಂಗದಳ ತಾಲೂಕು ಗೋರಕ್ಷಾ ಪ್ರಮುಖ್ ಚಿಕ್ಕಮಗಳೂರು, ಶಿವಣ್ಣ  ವಿಶ್ವ ಹಿಂದು ಪರಿಷತ್ ನಗರ ಅಧ್ಯಕ್ಷ , ದೇವು ವಿಶ್ವ ಹಿಂದು ಪರಿಷತ್ ನಗರ ಉಪಾಧ್ಯಕ್ಷ, ಮುರಳೀಧರ ಕಿಣಿ ವಿಶ್ವ ಹಿಂದು ಪರಿಷತ್ ನಗರ ಕಾರ್ಯದರ್ಶಿ, ಮಂಜು ಚಿಕ್ಕಮಗಳೂರು, ಪ್ರಸಾದ್ ಕೋಟೆ ನಗರ ಸಂಪರ್ಕ ಪ್ರಮುಖ್  ಬಜರಂಗದಳ ಚಿಕ್ಕಮಗಳೂರು,  ಮತ್ತು ಇತರರು ಉಪಸ್ಥಿತರಿದ್ದರು.