ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ನಾಳೆಯಿಂದ ಆಗುಂಬೆ ಘಾಟಿಯಲ್ಲಿ ರಸ್ತೆ ದುರಸ್ತಿ ಕಾರ್ಯವನ್ನು ಆರಂಭಮಾಡುವ ಸಲುವಾಗಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಇದನ್ನೂ ಓದಿ : 3.5 ಕ್ವಿಂಟಾಲ್ ಕಾಳುಮೆಣಸು ಕಳ್ಳತನ ನಡೆಸಿದ್ದ ಇಬ್ಬರು ಆರೋಪಿಗಳು ಪೊಲೀಸರ ಬಲೆಗೆ
ದಟ್ಟ ಅರಣ್ಯ ಪ್ರದೇಶವಾದ ಹಾಗೂ ಅನೇಕ ಔಷಧೀಯ ಸಸ್ಯಗಳನ್ನು ಹೊಂದಿರುವ ಹಾಗೂ ದಕ್ಷಿಣ ಭಾರತದ ಚಿರಾಪುಂಜಿ ಎಂದೇ ಪ್ರಸಿದ್ದಿ ಪಡೆದಿರುವ ಆಗುಂಬೆ ಘಾಟ್ ಅತ್ಯಂತ ಕಡಿದಾದ ಹಾಗೂ ಸಣ್ಣ ಸಣ್ಣ ತಿರುವುಗಳನ್ನು ಹೊಂದಿದೆ. ಶಿವಮೊಗ್ಗ ಹಾಗೂ ಉಡುಪಿಯನ್ನು ಸಂಪರ್ಕಿಸುವ ಆಗುಂಬೆ ಘಾಟ್ ನ ರಸ್ತೆ ದುರಸ್ತಿ ಮಾಡುವ ಸಲುವಾಗಿ ಹತ್ತು ದಿನಗಳ ಕಾಲ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ ಎಂದು ಶಿವಮೊಗ್ಗದ ಜಿಲ್ಲಾಧಿಕಾರಿಗಳಾದ ಡಾ.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಮಾರ್ಚ್ 5 ರಿಂದ ಮಾರ್ಚ್ 15 ರ ಬೆಳಗ್ಗೆ 07 ಗಂಟೆಯಿಂದ ಸಂಜೆ 07 ರ ವರೆಗೆ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ ಎಂದು ಆದೇಶಿಸಿದ್ದಾರೆ.
ಲಘು ವಾಹನಗಳಲ್ಲಿ ಸಂಚಾರ ಮಾಡುವವರು ಶೃಂಗೇರಿ,ಎಸ್.ಕೆ ಬಾರ್ಡರ್, ಮಾಳ ಘಾಟ್,ಕಾರ್ಕಳ ದ ಮೂಲಕ ಉಡುಪಿ ತಲುಪಬಹುದು.
ಭಾರೀ ಗಾತ್ರದ ವಾಹನಗಳು ಶಿವಮೊಗ್ಗ, ಆಯನೂರು, ಆನಂದಪುರ,ಸಾಗರ, ಹೊನ್ನಾವರದ ಮೂಲಕ ಪ್ರಯಾಣ ನಡೆಸಬೇಕು.

1 Comments
Las Vegas Hotel & Casino, Las Vegas, Nevada - MapYRO
ReplyDeleteFind the cheapest and 서울특별 출장마사지 quickest way to get from 동두천 출장마사지 Las Vegas Hotel 남원 출장마사지 & Casino, Las Vegas to 충주 출장샵 Mandalay 안성 출장마사지 Bay Resort and Casino, Las Vegas.