ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯ ಕಿಗ್ಗಾ ಋಷ್ಯಶೃಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಈ ಬಾರಿಯ ಜಾತ್ರಾ ಮಹೋತ್ಸವ ಏಪ್ರಿಲ್ ಎಂಟನೇ ತಾರೀಖಿಗೆ ನಿಗದಿಯಾಗಿದ್ದು, ಈ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ಸಮುದಾಯದವರು ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯಾಪಾರ ವಹಿವಾಟು ನಡೆಸಬಾರದು ಎಂಬ ಮನವಿಯನ್ನು ಹಿಂದೂ ಸಂಘಟನೆಗಳ ಮುಖಂಡರು ಈ ಹಿಂದೆ ನೀಡಿದ್ದರು. ಮನವಿ ಗ್ರಾ.ಪಂ ಸ್ಪಂದಿಸಿಲ್ಲ ಎಂದು ಕಿಗ್ಗಾ ಚಲೋ ಅಭಿಯಾನ ಕೂಡ ನಡೆದಿತ್ತು.
ಇದನ್ನೂ ಓದಿ : ವಿಶಾಲ್ ಬಸ್ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ
ಈ ಬಳಿಕ ಗ್ರಾಮ ಪಂಚಾಯತ್ ಸರ್ವ ಸದಸ್ಯರ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷರು ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳಾದ ಕೆ.ಎನ್ ರಮೇಶ್ ಹಾಗೂ ಚಿಕ್ಕಮಗಳೂರಿನ ಪೊಲೀಸ್ ಅಧೀಕ್ಷಕರೊಂದಿಗೆ ಈ ಕುರಿತು ವಿಷಯ ತಿಳಿಸಿ ಕಾನೂನಿನ ಅಡಿಯಲ್ಲಿ ಇರುವ ನಿಯಮಗಳ ಕುರಿತು ಚರ್ಚಿಸಿ ನಿರ್ಣಯ ಕೈಗೊಂಡಿದ್ದಾರೆ. ಅನ್ಯಧರ್ಮೀಯರಿಗೆ ವ್ಯಾಪಾರ ಅಥವಾ ಇನ್ನಿತರ ಕಾರ್ಯಗಳಿಗೆ ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿ ನಿರ್ಬಂಧ ಇರುವುದು ಕೇವಲ ದೇವಸ್ಥಾನಕ್ಕೆ ಒಳಪಡುವ ಜಾಗಗಳಿಗೆ ಹೊರತು ಗ್ರಾಮ ಠಾಣಾ ವ್ಯಾಪ್ತಿಗೆ ಅಲ್ಲ ಈ ಕಾರಣದಿಂದಾಗಿ ಅಂಗಡಿಯನ್ನಿಡಲಿಚ್ಚಿಸುವ ಅರ್ಜಿದಾರರಿಗೆ ವ್ಯಾಪಾರ ನಡೆಸಲು ಅವಕಾಶ ನೀಡಬಹುದು ಎಂಬ ಸೂಚನೆಯನ್ನು ಮಾನ್ಯ ಜಿಲ್ಲಾಧಿಕಾರಿಗಳು ನೀಡಿದ್ದಾರೆ ಅಂತೆಯೇ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮರ್ಕಲ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಾಣಿ ಅವರು ತಿಳಿಸಿದ್ದಾರೆ.
ನಾಮಕಾವಸ್ಥೆಗೆ ಗ್ರಾಮ ಸಭೆ;
ಹಿಂದೂ ಸಂಘಟನೆಗಳು ಕರೆ ಕೊಟ್ಟ ಕಿಗ್ಗಾ ಚಲೋದಲ್ಲಿ ಅಧ್ಯಕ್ಷರು ಸರ್ವ ಸದಸ್ಯರನ್ನು ಹಾಗೂ ಗ್ರಾಮಸ್ಥರನ್ನು ಕರೆದು ಇಂದು ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದರು. ಆದರೆ ಇಂದು ನಿಗದಿಯಾಗಿ ರದ್ದಾದ ಗ್ರಾಮ ಸಭೆಯ ಕುರಿತು ಯಾವುದೇ ಮಾಹಿತಿ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗಿರಲಿಲ್ಲ. ಇದಲ್ಲದೇ ಪಂಚಾಯತ್ ನ ಕೇವಲ ಐವರು ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಾಗಿದ್ದರು. ಕಾದು ಕಾದು ಸುಸ್ತಾದ ಗ್ರಾಮಸ್ಥರು ಕೊನೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಬಂದ ನಂತರ ಕೈಗೊಂಡ ನಿರ್ಣಯವನ್ನು ತಿಳಿಸುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷರು ನೆನ್ನೆ ಸಂಜೆ ಈ ಕುರಿತು ಸದಸ್ಯರುಗಳಿಗೆ ಕಾರ್ಯದರ್ಶಿಗಳ ಮೂಲಕ ಮಾಹಿತಿ ತಿಳಿಸುವಂತೆ ಹೇಳಲಾಗಿತ್ತು ಎಂದಿದ್ದಾರೆ.
ಹಿಂದೂ ಜಾಗೃತನಾಗಿದ್ದಾನೆ’ - ತೆರವು ಮಾಡಿದ್ದ ಜಾಗದಲ್ಲೇ ಬ್ಯಾನರ್ ಹಾಕಿದ ಹಿಂದೂಪರ ಸಂಘಟನೆ :
ಈ ಮಧ್ಯೆ ಇತ್ತೀಚೆಗಷ್ಟೇ ಊರಿನ ಗ್ರಾಮಸ್ಥರು ಹಾಗೂ ಹಿಂದೂಪರ ಸಂಘಟನೆಗಳು ಹಾಕಿದ್ದ ಅನ್ಯ ಧರ್ಮೀಯರಿಗೆ ಈ ಜಾತ್ರೆಯಲ್ಲಿ ವ್ಯಾಪಾರ ವಹಿವಾಟಿಗೆ ಅವಕಾಶವಿಲ್ಲ ಎಂಬ ಬ್ಯಾನರ್ ನ್ನು ಗ್ರಾಮ ಪಂಚಾಯತ್ ನವರು ಆ ಸ್ಥಳದಿಂದ ತೆರವುಗೊಳಿಸಿದ್ದರು. ಇಂದು ಪುನಃ ಅದೇ ಜಾಗದಲ್ಲಿ ಸ್ಥಳೀಯರು ಬೇರೆ ಬ್ಯಾನರ್ ಗಳನ್ನು ಪಂಚಾಯತ್ ಅನುಮತಿ ಪಡೆದು ಹಾಕಿದ್ದಾರೆ.
ನೀವು ಜನಿವಾರ ತೆಗೆದು ಬನ್ನಿ ನಾವು ಹಿಜಾಬ್ ತೆಗೆದು ಬರುತ್ತೇವೆ ಎಂದು ಆತ ಕಮೆಂಟ್ ಮಾಡಿದ್ದರ ಬಳಿಕವೇ ಹಿಂದೂ ಯುವಕರ ಭಾವನೆಗಳು ಕೆರಳಿವೆ. ಈ ರೀತಿ ಹಿಂದುಗಳ ಭಾವನೆಗೆ ಧಕ್ಕೆಯಾಗುವಂತೆ ನಡೆದುಕೊಳ್ಳುವುದು ತಪ್ಪು - ನೂತನ್ ಕುಮಾರ್, ಬಿಜೆಪಿ ಮುಖಂಡ
ಕಿಡಿ ಹಚ್ಚಿಸಿತೇ ಅಬ್ಬಾಸ್ ಕಿಗ್ಗಾ ಹಾಕಿದ್ದ ಅವಹೇಳನಾಕಾರಿ ಪೋಸ್ಟ್?
ಅನೇಕ ದಶಕಗಳಿಂದ ಕಿಗ್ಗಾದಲ್ಲಿ ಖುಷ್ಯಶೃಂಗ ಸ್ವಾಮಿ ದೇವಸ್ಥಾನದ ಜಾತ್ರಾ ಮಾಹೋತ್ಸವ ನಡೆಯುತ್ತಿದೆ. ಆದರೆ ಎಲ್ಲೂ ಕೋಮು ಭಾವನೆಗೆ ಧಕ್ಕೆ ತರುವಂತದ್ದಾಗಲಿ, ಹಿಂದೂಯೇತರರಿಗೆ ಅಂಗಡಿ ನೀಡಬೇಡಿ ಎಂಬ ಕೂಗು ಕೇಳಿ ಬಂದಿರಲಿಲ್ಲ. ಕಳೆದ ಎರಡು ತಿಂಗಳಿನಿಂದ ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ಘರ್ಷಣೆ, ಹೈ ಕೋರ್ಟ್ ತೀರ್ಪಿನ ವಿರುದ್ಧ ಮುಸ್ಲಿಂ ವ್ಯಾಪಾರಿಗಳು ಬಂದ್ ಮಾಡಿದ್ದೂ ಸಹ ಅಷ್ಟರ ಮಟ್ಟಿಗೆ ಕಿಗ್ಗಾ ಜಾತ್ರೆಗೆ ಪರಿಣಾಮ ಬೀರಿರಲಿಲ್ಲ.
ಆದರೆ ಫೇಸ್ಬುಕ್ ನಲ್ಲಿ ಅಬ್ಬಾಸ್ ಕಿಗ್ಗಾ ಎಂಬುವವರು ಹಾಕಿದ ಒಂದು ಪೋಸ್ಟ್ ಇಂದು ಇಡೀ ಕಿಗ್ಗವಷ್ಟೇ ಅಲ್ಲದೆ ಶೃಂಗೇರಿಯಲ್ಲೂ ಮುಸ್ಲಿಂ ಅಂಗಡಿ ನಿಷೇಧಿಸಬೇಕು ಎಂಬ ಕಿಚ್ಚು ಹಬ್ಬಿಸಿದೆ ಎಂದು ಆರೋಪಿಸಿದ್ದಾರೆ. ಅಬ್ಬಾಸ್ ಮೂಲತಃ ಕಿಗ್ಗಾದವರು, ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದು. ‘ಮುಂದಿನ ಬಾರಿ ನಿಮ್ಮ ಜನಿವಾರ ಹಾಗೂ ನಮ್ಮ ಬುರ್ಕಾ ಎರಡು ತೆಗೆದಿಟ್ಟು ಶಾಲೆಗೆ ಹೋಗೋಣ.ಪಾಪ ಬರೀ ಬುರ್ಕಾ ತೆಗೆದಿಟ್ಟು ನೀವು ಮಾತ್ರ ಧರ್ಮಾಂಧರಾಗೋದು ಬೇಡ’ ಎಂದು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಲ್ಲದೆ ಭಾರೀ ಟೀಕೆಗೆ ಒಳಗಾಗಿತ್ತು. ಎಲ್ಲೋ ಬೆಂಗಳೂರಿನಲ್ಲಿ ಕುಳಿತು ಮಾಡಿದ ಒಂದು ಪೋಸ್ಟ್ ಗೆ ಈಗ ಅನ್ಯೋನ್ಯತೆಯಿಂದಿದ್ದ ಇಡೀ ಕಿಗ್ಗಾ ಗ್ರಾಮಸ್ಥರ ನಡುವೆ ಬಿರುಕು ಮೂಡಿದಂತಾಗಿದೆ ಎಂದು ನಿಷೇದಕ್ಕೆ ಒತ್ತಾಯಿಸುತ್ತಿರುವವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ವಿಚಾರದ ಕುರಿತಾಗಿ ಹಲವೆಡೆ ಹೆಚ್ಚಿನ ವಿರೋಧವಿದ್ದು ಭಾರತ ಸಂವಿಧಾನಕ್ಕೆ ಗೌರವ ನೀಡದೆ ಅಗೌರವ ವ್ಯಕ್ತಪಡಿಸುವ ಈ ದೇಶದ ಕಾನೂನನ್ನು ಒಪ್ಪದವರಿಗೆ ಜಾತ್ರೆಯಲ್ಲಿ ವ್ಯಾಪಾರ ಮಾಡಲು ಅವಕಾಶ ಕೊಡಬಾರದು ಎಂಬ ಅಭಿಯಾನದ ಕೂಗು ಕೇಳಿಬಂದಿದೆ. ಜಾತ್ರೆಗೆ ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದ್ದು ಅಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ, ಪರ ವಿರೋಧದ ನಡುವೆ ಜಾತ್ರೆಯಾವ ರೀತಿಯಲ್ಲಿ ಸಾಗಲಿದೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.





4 Comments
https://m.facebook.com/story.php?story_fbid=5060500500637294&id=100000321830427
ReplyDeleteThis comment has been removed by the author.
ReplyDeleteಮೊನ್ನೆ ತಾನೆ ಕಿಗ್ಗದ ಅನೇಕ ಜನರನ್ನು ನಾನು ಟ್ಯಾಗ್ ಮಾಡಿ ಒಂದು ಪೋಸ್ಟ್ ಹಾಕಿದ್ದೆ.ಇದು ನನ್ನ ಹಾಗೂ ನನ್ನ ಸ್ನೇಹಿತನ ನಡುವೆ ನಡೆದ ಸಂಭಾಷಣೆಯ ತುಣುಕಷ್ಟೆ.ಅದು ಕೂಡ ಯಾರದ್ದೋ ಪೋಸ್ಟ್ನಲ್ಲಿ ನಡೆದಿರುವಂತದ್ದು.ಆ ನಂತರ ಸ್ಥಳಿಯ ಹಿತೈಸಿಗಳ ಒತ್ತಾಯದ ಮೇಲೆ ಆ ಸ್ಪಷ್ಟತೆಯನ್ನು ಡಿಲೀಟ್ ಮಾಡಿದ್ದೆ.
ReplyDeleteಈಗ ಸತ್ಯವನ್ನು ತೆರೆದಿಡಲೇ ಬೇಕಾಗಿದೆ.ಸುಮಾರು ದಿನಗಳ ಹಿಂದೆ ಮುಖ್ಯಮಂತ್ರಿಗಳಿಗೆ ಮನವಿ ಪತ್ರವೊಂದನ್ನು ಬರೆಯಲಾಗಿತ್ತು.ಇದೊಂದು ಬಾರಿ ಹಿಜಾಬ್ ಗೆ ಅವಕಾಶ ನೀಡಿ ಮಕ್ಕಳ ವಿಧ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂಬ ಮನವಿ.ಅದರಲ್ಲಿ ಯಾವ ಜಾತಿ ಧರ್ಮಕ್ಕೂ ಸಂಬಂಧ ಪಡದ ಒಂದು ಮನವಿ.ಅಲ್ಲಿಗೆ ಎಂಟ್ರಿ ಕೊಟ್ಟಿದ್ದ ನನ್ನ ಬ್ರಾಹ್ಮಣ ಸ್ನೇಹಿತ ರಾಘು ಮಾರ್ಷೆಲಾ ಅನ್ನುವಾತ ನೀವು ಈ ಬಾರಿ ಅವಕಾಶ ಕೊಟ್ಟರೆ ಪರೀಕ್ಷೆ ಮುಗಿದ ಮೇಲೂ ಪಟ್ಟು ಹಿಡಿಯುತ್ತೀರ ಅಂತ ಕೀಚಾಯಿಸಿದ್ದ.ಅದಕ್ಕೆ ಪ್ರತಿಕ್ರಿಯೆ ನೀಡಿದ ನಾನು ಸರಿಯಪ್ಪ ನಾನು ಹಿಜಾಬ್ ಹಾಕೋದಿಲ್ಲ ನೀ ನು ಜನಿವಾರನೂ ಹಾಕೋದು ಬೇಡ ಇಬ್ಬರು ಧರ್ಮಾಂಧರಾಗೋದು ಬೇಡ ಅನ್ನುವ ಉತ್ತರ ಕೊಟ್ಟಿದ್ದೆ.ಇದು ವಾತ್ಸವದಲ್ಲಿ ಯಾವುದೇ ರೀತಿಯ ಜಾತಿ ಧರ್ಮ ನಿಂದನೆಯಿಲ್ಲದೆ ಒರ್ವ ಬ್ರಾಹ್ಮಣ ಮತ್ತು ಮುಸ್ಲಿಮಾನ ನಡುವಿನ ಸಂಭಾಷಣೆ.ಮುಂದುವರಿದು ಆತ ನೀವು ಕಟ್ ಆದ ಪೀಸ್ ಮತ್ತೆ ಹೊಳಿಸಿಕೊಂಡು ಬನ್ನಿ ಅಂತ ಕಾಮೆಂಟ್ ಮಾಡಿ ಅದು ನೋಡಲು ಕಾಮಿಡಿಯಾಗಿದ್ದ ಕಾರಣ ಸ್ಕ್ರೀನ್ ಷಾಟ್ ತೆಗೆದು ಅನೇಕ ಕಡೆ ಹಂಚಿದ್ದ.ನಮ್ಮಿಬ್ಬರ ಸಂಭಾಷಣೆ ಆತ ಕೊಟ್ಟ ಸಾಂದರ್ಭಿಕ ಕಾಮಿಡಿ ಎಲ್ಲಾವೂ ಸೇರಿ ಅನೇಕರು ಇದನ್ನು ಹಂಚಿಕೊಂಡು ನಕ್ಕು ಸುಮ್ಮನಾಗಿದ್ದರು.ಅಷ್ಟರ ಮಟ್ಟಿಗೆ ಇದೊಂದು ಯಾವ ತರಹದ ಜಾತಿ ಧರ್ಮದ ವ್ಯಂಗ್ಯವಿಲ್ಲದ ತಿಳಿ ಹಾಸ್ಯವಾಗಿತ್ತು.ಇದರ ಪೂರ್ಣ ಪೋಟೋ ಲಗ್ಗತ್ತಿಸಲಾಗಿದೆ.
ಹಾಗೆಯೇ ನನ್ನ ಬರವಣಿಗೆಗಳಿಗೆ ಆತ ಅನೇಕ ಬಾರಿ ತುರ್ಕಾ ಅಂತಲೋ ,ಉಗ್ರ ಅಂತಲೋ ಕಾಮೆಂಟ್ ಮಾಡುವುದು ಇದೇ.ಆದರೇ ನಾನ್ಯವತ್ತು ಹಿಂದುರುಗಿ ಭಟ್ಟ ಅನ್ನುವ ಪದ ಕೂಡ ಬಳಸಿದ್ದಿಲ್ಲ.ಕಾರಣ ಇಷ್ಟೆ ನನ್ನೂರಿನ ನನ್ನ ಸ್ನೇಹಿತರಿಗೆ ಯಾವುದೇ ರೀತಿಯ ಮುಜುಗರ ಆಗಬಾರದು ಅನ್ನುವ ಕಾರಣಕ್ಕಾಗಿ.ಹಾಗೆ ನೋಡಿದರೇ ನನ್ನ ಬಾಲ್ಯದಿಂದಲೂ ನನ್ನ ಹೆಚ್ಚಿನ ಸ್ನೇಹಿತರು ಬ್ರಾಹ್ಮಣರೇ.
ನನ್ನ ಉಧ್ಯೋಗ ಅಥವಾ ತಂಗಿಯ ಮದುವೆ ಯಾವುದೇ ಇರಲಿ ಕಷ್ಟಕಾಲದಲ್ಲಿ ಕುಟುಂಬಷ್ಟರು ದೂರ ಇದ್ದಾಗ ಕೈ ಹಿಡಿದಿದ್ದು ಬ್ರಾಹ್ಮಣರು.ನನ್ನ ತಂಗಿಯ ಮದುವೆಯ ಸಂಧರ್ಭದಲ್ಲಂತೂ ಸುಮಾರು ಐದು ಲಕ್ಷ ಹಣವನ್ನು ಒಂದು ಪೇಪರ್ ಅಗಲಿ ,ಚೆಕ್ ನ ಸಹಾಯವಾಗಲಿ ಇಲ್ಲದೇ ನನ್ನ ಕೈಗೆ ಇಟ್ಟು ಹೋದವ ಒಬ್ಬ ಬ್ರಾಹ್ಮಣ ಸ್ನೇಹಿತ.
ನಾವು ಕಿಗ್ಗದಿಂದ ಶೃಂಗೇರಿಗೆ ಕಾಲೇಜಿಗೆ ಹೋಗುವಾಗ ನನ್ನ ಆಪ್ತ ನಾಗೇಶ್ ಭಟ್ ಅನ್ನುವವನು ನನ್ನನ್ನು ಕರೆಯುತ್ತಿದ್ದದ್ದು BMS( ಬೋಳಿ ಮಗ ಸಾಬು) ಅಂತಾ.ನಾನು ಕೂಡ ಆತನನ್ನು KKB( ಕಳ್ಳ ಕದೀಮ ಭಟ್ಟ) ಅಂತಲೇ ಕರೆಯುತ್ತಿದ್ದೆ.ಈಗಲೂ ಎದುರು ಬದುರಾದಗಲೂ ಹಾಗೆಯೇ ಕರೆಯುವುದು ಉಂಟು.ಅದೇ ಮುಗ್ದತೆಯಲ್ಲಿ ನಾವಿನ್ನು ಬದುಕುತ್ತಿದ್ದೆವೆ.
ನನ್ನೂರಿನ ಸ್ನೇಹಿತರಿಗೆ ನನ್ನದೊಂದು ಮನವಿ.ದಯಮಾಡಿ ಇದರ ರಾಜಕೀಯ ಕುತಂತ್ರದ ಅರಿವಿರಲಿ.ಮೊನ್ನೆ ತಾನೇ ಕಿಗ್ಗದ ಜನತೆ ಜಾತ್ರಾ ಮಹೋತ್ಸವದಲ್ಲಿ ಯಾವುದೇ ತಾರತಮ್ಯ ಮಾಡಬಾರದು ಅಂತ ಕಡಕ್ಕಾಗಿ ಸಮಾಜ ಒಡೆಯುವ ಶಕ್ತಿಗಳಿಗೆ ಚಾಟಿ ಬೀಸಿದ್ದಾರೆ.ಅದರಲ್ಲೂ ಈ ಬಗ್ಗೆ ಖಚಿತ ನಿಲುವು ತಲೆದು ಬೆಂಗಳೂರಿನಲ್ಲೂ ನಮ್ಮೂರು ಕೋಮುವಾದಿಗಳ ಬೀಡಲ್ಲ ಅಂತ ಹೆಮ್ಮೆಯಿಂದ ಎದೆತಟ್ಟಿ ಇವತ್ತು ನಾನು ಹೇಳಲು ಸಾಧ್ಯಾವಾದರೇ ಅದಕ್ಕೆ ಕಾರಣ ನಮ್ಮೂರಿನ ಗ್ರಾಮಪಂಚಾಯತ್ ಅಧ್ಯಕ್ಷೆ ಬ್ರಾಹ್ಮಣ ಮಹಿಳೆ.ಅಂತಹ ಪುಣ್ಯನೆಲ ಹಾಗೂ ಜನರನ್ನು ನಡುವೆ ಜನಿಸಿದ ನನಗೆ ಆಗಾದ ಹೆಮ್ಮೆ ಇದೆ.ಈಗ ಕುತಂತ್ರಕ್ಕೆ ಯಾವುದೇ ಅವಕಾಶ ಇಲ್ಲದಾದಗ ಎಲ್ಲೋ ಎಂದೋ ಹಾಕಿದ ಮೂಲೆಯಲ್ಲಿದ್ದ ತೀರ ನಕ್ಕು ಸುಮ್ಮನಾಗಬಹುದಾದಾ ಕಾಮೇಂಟ್ ಒಂದನ್ನು ಎಳೆದು ತರಲಾಗಿದೆ.ನಮ್ಮೂರಿನ ಬ್ರಾಹ್ಮಣರು ಅವರಿಬ್ಬರ ನಡುವಿನ ಸಂಭಾಷಣೆ ಅಂತ ಸಣ್ಣ ಜೋಕಾಗಿ ತೆಗೆದು ಕೊಂಡ ಹಳೆಯ ವಿಷಯವೊಂದು ತೆಗೆದುಕೊಂಡು ಸಾಮರಸ್ಯದಿಂದ ಬದುಕುತಿದ್ದ ಕಿಗ್ಗದಲ್ಲಿ ಜಾತ್ರೆಯ ಹೆಸರಲ್ಲಿ ಹುಳಿ ಹಿಂಡಳು ಹೊರಟು ಅದು ಕೈಲಾಗದೇ ಕಂಗಾಲಾಗಿ ಹೋದಾಗ ಬ್ರಾಹ್ಮಣರೇ ಅಲ್ಲದ ವ್ಯಕ್ತಿಯೊಬ್ಬರಿಗೆ ಇದೀಗ ಇದೊಂದು ದೊಡ್ಡ ಸಮಸ್ಯೆ ಆಗಿ ಬ್ರಾಹ್ಮಣರ ಮೇಲೆ ಹುಸಿ ಕಾಳಜಿ ಹುಟ್ಟಿದೆ.ಹಾಗೆ ಅವರಿಗೆ ಬ್ರಾಹ್ಮಣರ ಮೇಲೆ ನೈಜ ಕಾಳಜಿ ಇದ್ದಿದ್ದರೇ ಖಂಡಿತ ಕಿಗ್ಗ ಚಲೋ ದಿನ ಪ್ರತಿಭಟನಕಾರರು ಮಂಡಲ ಪಂಚಾಯತ್ ಅಧ್ಯಕ್ಷೆ ಸಭ್ಯ ಮಹಿಳೆಯೊಂದಿಗೆ ಕೂಗಾಡಿ ಚಿರಾಡಿ ಮಾತನಾಡಿದ ರೀತಿಯನ್ನು ಖಂಡಿಸಬೇಕಿತ್ತು. ಅದಲ್ಲದೇ ಪೇಪರ್ ನ ಬುದ್ದಿವಂತ ಹಾಕಿದ ಒಕ್ಕಣೆ " ಕಿಡಿ ಹೊತ್ತಿಸಿದ ಪೇಸ್ ಬುಕ್ ಪೋಸ್ಟ್ ಅದಕ್ಕಾಗಿ ಕಿಗ್ಗ ಜಾತ್ರೆಯಲ್ಲಿ ಸರ್ವಧರ್ಮಿಯರಿಗೂ ಅಂಗಡಿ ಇಡಲು ಗ್ರೀನ್ ಸಿಗ್ನಲ್ ಅಂತೆ" ಇದರ ಸತ್ಯ ಸತ್ಯತೆ ಇದರಲ್ಲೆಜ ವಿಶ್ಲೇಷಿಸಬಹುದು.!!
ನಾವಿನ್ನೂ BMS,KKB ಮುಗ್ದತೆಯಲ್ಲೆ ಇದ್ದೆವೆ.ಹಾಗಾಗಿ ನನಗೆ ನಾನೇನೋ ತಪ್ಪು ಮಾಡಿದ್ದೆನೆ ಅನಿಸುತ್ತಿಲ್ಲ.ಇದರಿಂದ ಯಾರಿಗಾದರೂ ನನ್ನ ಬ್ರಾಹ್ಮಣ ಸ್ನೇಹಿತರಿಗೆ ನೋವುಂಟಾಗಿದ್ದರೇ ಖಂಡಿತ ಕ್ಷಮೆ ಇರಲಿ.
ಮತ್ತೊಂದು ವಿಚಾರ ಸಹೃದಯರು ಗಮನಿಸಬೇಕು ಜಾತ್ರೆಯ ಅಂಗಡಿಗೆ ಪ್ರತಿಭಟನೆಗೆ ಒತ್ತಾಯಿಸುವಾಗ ಈ ಪೋಸ್ಟ್ ನ ಯಾವ ವಿಚಾರವೂ ಚರ್ಚೆಯಾಗಿಲ್ಲ.ಈಗ ಎಲ್ಲೂ ಕೂಡ ವಿಘ್ನ ಕಾರ್ಯ ಕೈಗೂಡದೇ ಇದ್ದಾಗ ಈ ವಿಚಾರ ಬಂದಿದೆ.ನನ್ನಿಂದಾಗಿ ನನ್ನೂರಿಗೆ ಯಾವುದೇ ಕಳಂಕ ಬರಬಾರದು.ಹಾಗೂ ಕುತಂತ್ರಿಗಳ ಕೈ ಮೇಲಾಗಬಾರದು ಮೂಲ ಬರಹ ಹಾಗೂ ಅದರ ನಡುವಿನ ಸಂಬಾಷಣೆ ಎಲ್ಲಾವನ್ನೂ ಯಾವುದೇ ಪರ್ಮಿಷನ್ ಇಲ್ಲದೇ ಟ್ಯಾಗ್ ಮಾಡಿದ್ದೆನೆ. ಕ್ಷಮೆ ಇರಲಿ.
Hi Abbas I appreciate your real time reaction
Delete