ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲಿ ಎಸಿಬಿ ಅಧಿಕಾರಿಗಳ ಬಲೆಗೆ ಅಧಿಕಾರಿಯೋರ್ವ ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ. 

ಇದನ್ನೂ ಓದಿ : ಬಸ್ ಹಾಗೂ ಪಿಕಪ್ ವಾಹನದ ನಡುವೆ ರಸ್ತೆ ಅಪಘಾತ

ಚಿಕ್ಕಮಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಸಹಾಯಕ ಯೋಜನಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಿವಕುಮಾರ್ ಗೋಪಿನಾಥ್ ಎಂಬ ವ್ಯಕ್ತಿಯಿಂದ ಲೇಔಟ್ ನಿರ್ಮಾಣದ ಸಲುವಾಗಿ ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲಿ ಎಸಿಬಿ ಅಧಿಕಾರಿಗಳಾದ ಅನಿಲ್ ರಾಥೋಡ್ ಅವರ ನೇತೃತ್ವದ ತಂಡದವರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಈತ ಎಂಟೂವರೆ ಲಕ್ಷ ಹಣವನ್ನು ಗೋಪಿನಾಥ್ ಅವರಿಂದ ಡಿಮ್ಯಾಂಡ್ ಮಾಡಿ ಮುಂಗಡ ಹಣವಾದ ಎರಡು ಲಕ್ಷವನ್ನು ಪಡೆಯುವ ವೇಳೆ ಲಾಕ್ ಆಗಿದ್ದಾನೆ. ಈ ಕಾರ್ಯಕ್ಕೆ ಮಧ್ಯವರ್ತಿಯಾಗಿ ಬ್ರೋಕರ್ ರಮೇಶ್ ಎಂಬಾತ ಇದ್ದ ಎಂದೂ ಆತನ ಮೂಲಕ ಅಧಿಕಾರಿಯನ್ನು ದೂರುದಾರರಾದ ಗೋಪಿನಾಥ್ ತಿಳಿಸಿದ್ದಾರೆ. 

ಈ ಕುರಿತು ಎಸಿಬಿ ಅಧಿಕಾರಿಗಳು ತನಿಖೆ ಆರಂಭಿಸಿದ್ದು ಆತನ ಸಂಪೂರ್ಣ ವಿಚಾರಣೆಯ ನಂತರದಲ್ಲಿ ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಘಟನೆಯ ಸಂಬಂಧ ಈಗಾಗಲೇ ಅನೇಕ ಭ್ರಷ್ಟರಿಗೆ ನಡುಕ ಆರಂಭವಾಗಿದ್ದು ಇನ್ನೇನು ಭ್ರಷ್ಟಾಚಾರದಲ್ಲಿ ತಾಂಡವ ಆಡುತ್ತಿರುವ ಮಲೆನಾಡಿನ ಇನ್ನೂ ಕೆಲ ಅಧಿಕಾರಿಗಳ ಮುಖವಾಡ ಕಳಚುವ ಎಲ್ಲಾ ಸಾಧ್ಯತೆಗಳಿದೆ. 

ತನು ಕೊಟ್ಟಿಗೆಹಾರ, ವರದಿಗಾರರು