ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರ ಧರ್ಮ ಪತ್ನಿಯೊಬ್ಬರ ‘ರೀಲ್ಸ್ ಹುಚ್ಚು’ ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೊಳಗಾಗಿದೆ.
ಇದನ್ನೂ ಓದಿ : ರಭಸವಾಗಿ ವಾಹನ ಹರಿದು ಮಲಗಿದ್ದ ಎರಡು ಹಸುಗಳು ಸಾವು
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬಾಳಗಡಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರ ಧರ್ಮಪತ್ನಿ ಕಾಲೇಜಿನ ಕಾರಿಡಾರ್ ನಲ್ಲಿ ರೀಲ್ಸ್ (Short Video) ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವೀಡಿಯೋದಲ್ಲಿ ಸ್ವತಃ ಪ್ರಾಂಶುಪಾಲರು ಕೂಡ ಇದ್ದು, ಸದ್ಯ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
‘ಬೆಲ್.. ಬೆಲ್.. ಬೆಲ್ಲೂ ಹೊಡಿತಾನೆ’ ಹಾಡಿಗೆ ಮೇಡಮ್ ಆ್ಯಕ್ಟಿಂಗ್
14 ಸೆಕೆಂಡ್ ಇರುವ ಈ ವೀಡಿಯೋ ತುಣುಕು ಕಾಲೇಜಿನ ವಿದ್ಯಾರ್ಥಿಗಳ ಮೊಬೈಲ್ ಸ್ಟೇಟಸ್ ಗಳಲ್ಲೇ ವೈರಲ್ ಆಗಿದ್ದು, ‘ನಾವು ಹುಡುಗೀರು ರೆಡಿ ಆಗೋದು ಊರೋರೆಲ್ಲಾ ನೋಡ್ಲಿ ಅಂತ ಜನ ಅನ್ಕೋತಾರೆ.. ಯಾರ್ ಗುರು ಹೇಳಿದ್ದು.. ನಮ್ ಹುಡ್ಗ ನೋಡ್ಲಿ ಅಂತ’ ಎಂಬ ಹಿನ್ನಲೆ ಧ್ವನಿ ಮುಗೀತಿದ್ದಾಗೆ ಮೇಡಮ್ಮು ತಮ್ಮ ಹುಡ್ಗನ್ನ ವೀಡಿಯೋದಲ್ಲಿ ತೋರಿಸಿದ್ದಾರೆ. ಮೇಲ್ಮಹಡಿಯಲ್ಲಿ ನಿಂತು ಕೆಳಗೆ ಕಾರಿಡಾರ್ ನಲ್ಲಿ ನಡ್ಕೊಂಡು ಬರ್ತಿರೋ ತಮ್ಮ ಪತಿಯನ್ನ (ಕಾಲೇಜು ಪ್ರಾಂಶುಪಾಲರು) ತೋರ್ಸಿದ್ದಾರೆ. ಇತ್ತ ಬೆಲ್ ಬೆಲ್ ಬೆಲ್ಲೂ ಹೊಡಿತಾನೆ.. ಎದೆಯಾ ಒಳಗೆ ಗಲ್ ಗಲ್.. ಎನ್ನುತ್ತಾ ರೀಲ್ಸ್ ಮುಗಿಯುತ್ತದೆ.
ಕೊಪ್ಪ; ಸರ್ಕಾರಿ ಕಾಲೇಜು ಪ್ರಾಂಶುಪಾಲರ ಹೆಂಡ್ತಿಯ ರೀಲ್ಸ್ ಹುಚ್ಚು pic.twitter.com/ueSlUjzkmi
— News Malnad (@NewsMalnadMedia) August 2, 2022
ವಿದ್ಯಾರ್ಥಿಗಳಿಗೆ ಏನು ಸಂದೇಶ ಕೊಡಲು ಹೊರಟಿದ್ದೀರಿ? ಸಾಮಾಜಿಕ ಜಾಲತಾಣದಲ್ಲಿ ತರಾಟೆ
ಇನ್ನು ಈ ವೀಡಿಯೋವನ್ನು ಕಾಲೇಜಿನ ವಿದ್ಯಾರ್ಥಿಗಳ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದು, ಇದೀಗ ಫೇಸ್ಬುಕ್, ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಇವರು ಮಾಡಿರುವ ವೀಡಿಯೋದಲ್ಲಿರುವ ಡೈಲಾಗ್ ಗಳು, ಸಾಂಗ್ ಗಳು ವಿದ್ಯಾರ್ಥಿಗಳಿಗೆ ಏನು ಸಂದೇಶ ನೀಡಿದಂತಾಗುತ್ತದೆ? ಕಾಲೇಜಿನ ಮುಖ್ಯಸ್ಥರೇ ಈ ರೀತಿ ವರ್ತಿಸಿದರೆ ವಿದ್ಯಾರ್ಥಿಗಳು ಇದನ್ನೇ ಫಾಲೋ ಮಾಡುವುದಿಲ್ಲವೇ ಎಂಬ ಪ್ರಶ್ನೆಗಳು ಮೂಡಿವೆ. ಈ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರಾಂಶುಪಾಲರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂಬ ಮಾತುಗಳು ಕೇಳಿಬಂದಿವೆ.
ಕಾಲೇಜಿನಲ್ಲಿ ಇನ್ನು ಮುಂದೆ ಟಿಕ್ ಟಾಕ್/ ರೀಲ್ಸ್ ಮಾಡುವಂತಿಲ್ಲ; ಕ್ಷಮೆ ಕೇಳಿ ಪ್ರಾಂಶುಪಾಲರಿಂದಲೇ ನೋಟೀಸ್ :
ಇನ್ನು ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ವಿವಿಧ ಸಂಘಟನೆಗಳ ಮುಖಂಡರು ಕಾಲೇಜಿಗೆ ಭೇಟಿ ನೀಡಿದ್ದು ಪ್ರಾಂಶುಪಾಲರನ್ನು ತರಾಟೆಗೆ ತೆಗದುಕೊಂಡಿದ್ದಾರೆ. ಈ ಬಳಿಕ ಪ್ರಿನ್ಸಿಪಾಲ್ ಕ್ಷಮೆ ಕೇಳಿದ್ದು ಇನ್ನು ಮುಂದೆ ಕಾಲೇಜಿನ ಆವರಣದಲ್ಲಿ ಟಿಕ್ ಟಾಕ್/ ರೀಲ್ಸ್/ಫೋಟೋ/ ವೀಡಿಯೋ ಮಾಡಲು ಅವಕಾಶವಿಲ್ಲ. ಒಂದುವೇಳೆ ನಿಯಮ ಮೀರಿದಲ್ಲಿ ಮೇಲಾಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ವರದಿ ಮಾಡಲಾಗುವುದು ಎಂದು ನೋಟಿಸ್ ನಲ್ಲಿ ಸ್ವತಃ ಪ್ರಾಂಶುಪಾಲರೇ ತಿಳಿಸಿದ್ದಾರೆ.


.jpeg)




1 Comments
This comment has been removed by the author.
ReplyDelete